ಶಬ್ದವೇಧಿ ೨೦೦೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದು ರಾಜ್ ಕುಮಾರ್ ರವರ ಅಂತಿಮ ಚಲನಚಿತ್ರವಾಗಿತ್ತು. ಇದರ ನಿರ್ದೇಶಕ ಎಸ್. ನಾರಾಯಣ್ ಮತ್ತು ತಾರಾಗಣದಲ್ಲಿ ಜಯಪ್ರದಾ, ಅಶ್ವಥ್, ಸಾಹುಕಾರ್ ಜಾನಕಿ ಮತ್ತು ಉಮಾಶ್ರೀ ಇದ್ದಾರೆ. ಈ ಚಲನಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಹಂಸಲೇಖ ನೀಡಿದ್ದಾರೆ. ಚಲನಚಿತ್ರವು ಒಳ್ಳೆಯ ಯಶಸ್ಸನ್ನು ಪಡೆದು ರಜತಮಹೋತ್ಸವವನ್ನು ಆಚರಿಸಿತು. == ಉಲ್ಲೇಖಗಳು ==